ಇಸ್ಕಾನ್ ಬೆಂಗಳೂರಿನ ಮಹೋತ್ಸವ ಚೈತನ್ಯದಾಸ್ ಅವರೊಂದಿಗೆ ನಂದಿ ರಥಯಾತ್ರೆ ಬಗೆಗಿನ ಮಾಹಿತಿ ವಿನಿಮಯ

ಡಿಸೆಂಬರ್ 17 ,2024;ಮಂಗಳವಾರ ಮಹಾಲಕ್ಷ್ಮಿ ಲೇಔಟ್, ಇಸ್ಕಾನ್ ಬೆಂಗಳೂರಿನ ಮಹೋತ್ಸವ ಚೈತನ್ಯದಾಸ್ ಅವರೊಂದಿಗೆ ನಂದಿ ರಥಯಾತ್ರೆ ಬಗೆಗಿನ ಮಾಹಿತಿ ವಿನಿಮಯ. ರಾಜ್ಯಾದ್ಯಂತ ಇಸ್ಕಾನ್ ಬೆಂಗಳೂರಿನ ಕಡೆಯಿಂದ ಯಾತ್ರೆಗೆ ಸಂಪೂರ್ಣ ಸಹಕಾರ ಹಾಗೂ ಕಾರ್ಯಕ್ರಮ ನಡೆಯುವ ಸ್ಥಾನಗಳಲ್ಲಿ, ಅವಶ್ಯಕತೆಗೆ ತಕ್ಕಂತೆ, ಅಕ್ಷಯ ಪಾತ್ರೆಯ ಪ್ರಸಾದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

ಇಸ್ಕಾನ್ ಬೆಂಗಳೂರಿನಲ್ಲಿ ರಥ ಉಳಿಸಲು ವ್ಯವಸ್ಥೆ ಮಾಡುವುದರ ಜೊತೆಗೆ, ವಿಷ್ಣು ಸಹಸ್ರನಾಮ ಪಠಣ ಮಾಡುವ ಭಕ್ತರ ತಂಡವನ್ನು ಸಂಜೆಯ ಸಭಾ ಕಾರ್ಯಕ್ರಮದ ಸಂದರ್ಭದಲ್ಲಿ ಜೋಡಿಸುವುದಾಗಿ ಹೇಳಿದರು. ಸಂಘ ಕಾರ್ಯದ ಜೊತೆಗೆ ಯಾವತ್ತೂ ಇರುವುದಾಗಿ ತಿಳಿಸಿದರು.