ದಿನಾಂಕ 30/12/24 ರಂದು ರಾಧಾಸುರಭಿ ಗೋಮಂದಿರ ದಲ್ಲಿ, ನಂದಿಪೂಜೆ, ಸಾಮೂಹಿಕ ವಿಷ್ಣುಸಹಸ್ರನಾಮದೊಂದಿಗೆ, ನಂದಿ ರಥಯಾತ್ರೆಯ ಉದ್ಘಾಟನೆ ನಡೆಯಿತು. ಉದ್ಘಾಟನಾ ಭಾಷಣ ಮಾಡಿದ ರಾಷ್ಟೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕಾರ್ಯಕಾರಿಣಿ ಸದಸ್ಯರಾದ ಮಾನ್ಯ ಶಂಕರ್ ಲಾಲ್ ಜೀಯವರು ನಂದಿ ರಥಯಾತ್ರೆಯ ಉದ್ಧೇಶವನ್ನು ವಿವರಿಸಿದರು.
ಗೋವು ನಡೆದಾಡುವ ಔಷದಾಲಯ, ಆರೋಗ್ಯಯುತ, ಋಣಮುಕ್ತ, ಪ್ರಧೂಷಣ ಮುಕ್ತ, ಸಂಪದ್ಬರಿತ,ದ್ವೇಷಮುಕ್ತ, ಆಹಾರ ಸಮೃದ್ಧ ಭಾರತಕ್ಕಾಗಿ ಗೋವಿನ ಉಳಿವು ಹಾಗೂ ಸಂವರ್ಧನೆ ಅಗತ್ಯ ಎಂದರು. ಭಕ್ತಿ ಭೂಷಣ್ ಜಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆಶೀರ್ವಚನ ನೀಡಿದ ಪೂಜ್ಯ ಶ್ರೀ ಸಾಯಿ ಈಶ್ವರ್ ಗುರೂಜಿಗಳನ್ನೊಳಗೊಂಡಂತೆ ಇಬ್ಬರಿಗೆ, 2 ನಂದಿಗಳನ್ನು ದಾನ ನೀಡಲಾಯಿತು.
ಮಂಗಳೂರಿನ ಕಾರಸ್ಟ್ರೀಟ್ ನಲ್ಲಿ ರಾಧಾಸುರಭಿ ಗೊಮಂದಿರದ ಮೊದಲ ಗವ್ಯ ಉತ್ಪನ್ನ ಮಾರಾಟ ಮಳಿಗೆಯ ಉದ್ಘಾಟನೆಯನ್ನು ಪೂಜ್ಯ ಸ್ವಾಮೀಜಿಯವರು ನೆರವೇರಿಸಿದರು.
ವೇದಿಕೆಯಲ್ಲಿ ರಾಮರಾವ್, ಗೋಸೇವಾ ಗತಿವಿಧಿ ದಕ್ಷಿಣ ಮಧ್ಯ ಕ್ಷೇತ್ರ ಸಂಪರ್ಕ ಅಧಿಕಾರಿ, ಪ್ರವೀಣ ಸರಳಾಯ ಗೋಸೇವಾ ಗತಿವಿಧಿ, ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕರು,ಅನಿಲ್ ಪಂಡಿತ್ ನಂದಿ ರಥ ಯಾತ್ರೆ ಸಂಘಟನಾ ಕಾರ್ಯದರ್ಶಿ ಉಪಸ್ಥಿತರಿದ್ದರು.ಭಾರತ ಪರಿಕ್ರಮ ಪಾದಯಾತ್ರೆ ನಡೆಸಿರುವ ಮಾನ್ಯ ಸೀತಾರಾಮ ಕೆದಿಲಾಯ, ನಂದಿ ರಥ ಯಾತ್ರೆ ಪ್ರಧಾನ ಕಾರ್ಯದರ್ಶಿ ನವೀನ್ ಮಾರ್ಲ ಕೊಡ್ಮಣ್, ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಬೊಟ್ಯಾಡಿ, ಗೋಪಾಲಕೃಷ್ಣ ಭಟ್ ಅಡ್ಯನಡ್ಕ, ಪ್ರಸಾದ್ ವಕೀಲರು ಬಿ ಸಿ ರೋಡ್,ಪೀತಾಂಬರ ವಕೀಲರು ಮಂಗಳೂರು, ರಥ ಯಾತ್ರೆಯ ಖಜಾಂಚಿ ಗಳಾದ ವಿನಯ, ಸಂದೇಶ್, ಗಂಗಾಧರ್ ಪೆರ್ಮಂಕಿ, ಜಿತೇಂದ್ರ ಪ್ರತಾಪ್ ನಗರ ಮೊದಲಾದ ಅನೇಕ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರಥ ಯಾತ್ರೆಯಲ್ಲಿ ಕಾರ್ಯಕರ್ತರಾಗಿ 88 ದಿನಗಳ ಕಾಲ ಪಾಲ್ಗೊಳ್ಳುವ 9 ಮಂದಿಗೆ ಶಾಲು ಹೊದಿಸಿ ಗೌರವಿಸಲಾಯಿತು. ತಾರಾನಾಥ ಕೊಟ್ಟಾರಿ ಅವರು ಕಾರ್ಯಕ್ರಮ ನಿರೂಪಿಸಿದರು, ಗಣೇಶ್ ಭಟ್ ಸುಜೀರ್ ಅವರು ವಿಷ್ಣು ಸಹಸ್ರನಾಮ ಹೇಳಿಕೊಟ್ಟರು. ಮಂಗಳೂರಿನ ವಕೀಲರ ಸಂಘಧ ಸಹಯೋಗದೊಂದಿಗೆ ಕಾರ್ಯಕ್ರಮ ಶಿಸ್ತು ಬದ್ಧವಾಗಿ ಸಂಪನ್ನ ಣಗೊಂಡಿತು













