ನಂದಿ ರಥಯಾತ್ರೆ – ಬೆಂಗಳೂರು ದಕ್ಷಿಣ ವಿಭಾಗದ ಯೋಜನಾ ಬೈಠಕ್

ಡಿಸೆಂಬರ್ 17 ಮಂಗಳವಾರ 2024, ಬೆಂಗಳೂರು ಮೆಜೆಸ್ಟಿಕ್ ನಲ್ಲಿರುವ ಮಾಧವ ಸ್ಮೃತಿ, ಕಾರ್ಯಾಲಯದಲ್ಲಿ ನಂದಿ ರಥಯಾತ್ರೆ, ಬೆಂಗಳೂರು ದಕ್ಷಿಣ ವಿಭಾಗದ ಯೋಜನಾ ಬೈಠಕ್ ನಡೆಯಿತು.
ಮಾರ್ಚ್ 1 ಹಾಗೂ 2, 2025 ರಂದು ಜಯನಗರ ಹಾಗೂ ಮೆಜೆಸ್ಟಿಕ್ ನಲ್ಲಿ ನಡೆಯುವ ರಥ ಯಾತ್ರೆ ಹಾಗೂ ಸಾರ್ವಜನಿಕ ಕಾರ್ಯಕ್ರಮದ ಬಗ್ಗೆ ವಿಸ್ತೃತ ಚರ್ಚೆ ಹಾಗೂ ಯೋಜನೆ ನಡೆಯಿತು. ಐದು ಸಾವಿರಕ್ಕಿಂತ ಹೆಚ್ಚು ಸಂಖ್ಯೆ ಸೇರಿಸುವ ಗುರಿ, ಒಂದು ವಾರ ಮುಂಚಿತವಾಗಿ ವಿಷ್ಣು ಸಹಸ್ರನಾಮ ಪಠಣಕ್ಕಾಗಿ ಸೇರುವುದು, ಪ್ರಮುಖ ಸ್ಥಾನಗಳಲ್ಲಿ ಗಣ್ಯರನ್ನು ಒಳಗೊಂಡಂತೆ ನಂದಿ ಪೂಜೆ ನಡೆಸುವ ಕೇಂದ್ರಗಳನ್ನು ಗುರುತಿಸುವುದು, ಕರಪತ್ರ ಮುದ್ರಣ, ದಾನಿಗಳನ್ನು ಗೌರವಿಸುವುದು, ಗವ್ಯ ಉತ್ಪನ್ನ ಮಾರುಕಟ್ಟೆ ಕೇಂದ್ರಗಳನ್ನು ಉದ್ಘಾಟನೆ ಮಾಡುವುದು ಇತ್ಯಾದಿ ಇತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲಾಯಿತು.ಈ ಸಂದರ್ಭದಲ್ಲಿ ರಾಧಾ ಸುರಭಿ ಗೋ ಮಂದಿರದ ಭಕ್ತಿ ಭೂಷಣ್ ಜಿ, ಮಧುಸೂದನ್ ಜೀವಾಜಿ, ಗೋ ಸೇವಾ ಗತಿ ವಿಧಿ ಪ್ರಾಂತ ಸಂಯೋಜಕರಾದ ಪ್ರವೀಣ ಸರಳಾಯ, ಕೃಷ್ಣಾನಂದ ಪಟ್ಟಾಭಿರಾಮನ್, ಪ್ರೇಮಾನಂದ, ರಾಜು ಬಾರ್ವಿ ,
ಹುಕ್ಮಾರಾಮ್ ಪಟೇಲ್, ಧನುಷ್ ದೊಡ್ಡ ಬಳ್ಳಾಪುರ ಮೊದಲಾದವರು ಉಪಸ್ಥಿತರಿದ್ದರು